Saturday, September 17, 2022
Articlesವೃತ್ತಿ ಮಾರ್ಗದರ್ಶನ ಕೇಂದ್ರವನ್ನು ಶಾಲೆಗಳಲ್ಲಿ ಅನುಷ್ಠಾನಿಸುವ ಬಗ್ಗೆ ಒಂದು ಚಿಂತನೆ

ವೃತ್ತಿ ಮಾರ್ಗದರ್ಶನ ಕೇಂದ್ರವನ್ನು ಶಾಲೆಗಳಲ್ಲಿ ಅನುಷ್ಠಾನಿಸುವ ಬಗ್ಗೆ ಒಂದು ಚಿಂತನೆ

ರೆನ್ನಿ ಡಿಸೋಜ, ಮಂಗಳೂರು
ವೃತ್ತಿ ಮಾರ್ಗದರ್ಶನ ಕೇಂದ್ರವನ್ನು ಶಾಲೆಗಳಲ್ಲಿ
ಅನುಷ್ಠಾನಿಸುವ ಬಗ್ಗೆ ಒಂದು ಚಿಂತನೆ

ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಸಂವಿಧಾನದ ಆಶಯವನ್ನು ಈಡೇರಿಸಲು ಪ್ರತಿಯೊಂದು ವ್ಯಕ್ತಿಗೆ ಸಮರ್ಪಕ ಶಿಕ್ಷಣ ಸಿಕ್ಕಿದಾಗ ಮಾತ್ರ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆ ಎಲ್ಲ ವರ್ಗದ ಜನರಿಗೆ ಪ್ರಯೋಜನಕಾರಿಯಾದೀತು. ಶಿಕ್ಷಣವೆಂದಾಕ್ಷಣ ಇಲ್ಲಿ ಬರೀ ಒಂದು ಬರಹ ಮಾತ್ರವಲ್ಲ ಒಂದು ವ್ಯಕ್ತಿಯನ್ನು ತನ್ನ ಮುಂದಿನ ಬದುಕಿಗೆ ಬೇಕಾದ ಜೀವನ ಕೌಶಲ್ಯ ಸಾಮರ್ಥ್ಯ ಹಾಗೂ ತನ್ನ ಜೀವನೋಪಾಯವನ್ನು ತಾನೇ ಕಂಡುಕೊಳ್ಳಲು ಸರ್ವತೋಮುಖ ಅಭಿವೃದ್ಧಿ ಪಡಿಸುವುದೇ ಶಿಕ್ಷಣ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣವು ಮಗುವಿನಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕಲಿಕೆಯ ವಿವಿಧ ಪರಿಕಲ್ಪನೆಗಳಲ್ಲಿ ಅರ್ಥಮಾಡಿಸುತ್ತಾ ತಮ್ಮ ಬದುಕಿನ ಮುಂದಿನ ಭವಿಷ್ಯಕ್ಕೆ ಅಡಿಪಾಯ ಹಾಕುತ್ತದೆ. ಮುಂದಿನ ಹಂತದಲ್ಲಿ ಪ್ರೌಢ ಶಾಲೆಗೆ ಬರುವಾಗ ಮಕ್ಕಳು ತಮ್ಮ ಮುಂದಿನ ಶಿಕ್ಷಣವನ್ನು ಇನ್ನಷ್ಟು ವಿಸ್ತಾರಗೊಳಿಸುತ್ತಾ ಗ್ರಹಿಸುವ ಶಕ್ತಿಯನ್ನು ಪಡೆದಿರುತ್ತಾರೆ. ಈ ಕುರಿತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಇಲ್ಲಿ ಸವಿಸ್ತಾರವಾಗಿ ಚರ್ಚಿಸಿರುತ್ತಾರೆ.

ಅದರ ಪ್ರಕಾರ ಮಾಧ್ಯಮಿಕ ಶಾಲಾ ಶಿಕ್ಷಣಾವಧಿ ತೀವ್ರ ಭೌತಿಕ ಬದಲಾವಣೆ ಮತ್ತು ವ್ಯಕ್ತಿತ್ವ ರೂಪುಗೊಳ್ಳುವ ಕಾಲ.

ಅದು ತೀವ್ರ ಸ್ಪಂದನ ಮತ್ತು ಶಕ್ತಿಯ ಕಾಲವೂ ಹೌದು. ಅಮೂರ್ತ ರೂಪಗಳನ್ನು ವಿವೇಚನೆಯಿಂದ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ತಾರ್ಕಿಕ ಜ್ಞಾನ ಲಭ್ಯವಾಗುವುದು ಇಲ್ಲೇ. ಈಗ ಮತ್ತು ಇಲ್ಲಿಂದ ಆಚೆ ಮಕ್ಕಳು ತಮ್ಮ ಬಗೆಗೆ ಆಳವಾದ ತಿಳುವಳಿಕೆ ಮತ್ತು ಜ್ಞಾನದ ಉತ್ಪತ್ತಿ ಇವುಗಳನ್ನು ಅರಿತುಕೊಳ್ಳುವ ಸಾಧ್ಯಾಸಾಧ್ಯತೆಗೆ ಅನುವು ಮಾಡಿಕೊಡುವುದು ಮುಖ್ಯ. ಇದೇ ಅವಧಿಯಲ್ಲಿ ಸಮಾಜದೊಡನೆ ತನ್ನ ಸಂಬಂಧ ಕುರಿತು ವಿಮರ್ಶಾತ್ಮಕ ಅರಿವು ಕೂಡಾ ಮೂಡುತ್ತದೆ. ಈ ಹಂತದಲ್ಲಿ ಅಳವಡಿಸಿರುವ ವ್ಯಾಸಂಗ ಕ್ರಮಗಳು ವಿವಿಧ ಶಾಖೆಗಳ ಬಗ್ಗೆ ಅರಿವನ್ನು ಮೂಡಿಸುವ ಗುರಿಯನ್ನು ಹೊಂದಿರುತ್ತದೆ. ಮತ್ತು ವಿದ್ಯಾರ್ಥಿಗಳಲ್ಲಿ ಅಧ್ಯಯನದ ವ್ಯಾಪ್ತಿ ಸಾಧ್ಯತೆಗಳನ್ನು ಪರಿಚಯಿಸುತ್ತದೆ. ಹೀಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಅವರು ತಮ್ಮ ಆಸಕ್ತಿ ಮತ್ತು ಪೃವೃತ್ತಿಗಳನ್ನು ಕಂಡುಕೊಳ್ಳುತ್ತಾರೆ. ಅನಂತರ ಯಾವ ಉದ್ಯೋಗ ಮತ್ತು ತತ್ಸಂಬಂಧವಾದ ಅಧ್ಯಯನವನ್ನು ಮಾಡಬೇಕು ಎಂಬ ಬಗ್ಗೆ ಕಲ್ಪಿಸಿಕೊಳ್ಳಲು ಆರಂಭಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಇದು ಶಾಲೆಯನ್ನು ಬಿಡುವ ಅಂತಿಮ ಘಟ್ಟವಾಗಿದ್ದು ಈ ಅವಧಿಯಲ್ಲಿ ಉತ್ಪಾದಕ ಕೌಶಲ್ಯಗಳನ್ನು ಬೆಳೆಸಿಕೊಳ್ಳತೊಡಗುತ್ತಾರೆ. ಅನೇಕ ಮಕ್ಕಳಿಗೆ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಗಳಿಂದ ಇದು ವ್ಯಾಸಂಗದ ಅಂತಿಮ ಹಂತವಾದುದರಿಂದ ಮಾಧ್ಯಮಿಕ ಶಿಕ್ಷಣದ ಸಾರ್ವತ್ರೀಕರಣವಾಗುತ್ತಿರುವ ಈ ಹಂತದಲ್ಲಿ ಮಕ್ಕಳಿಗೆ ಸೃಜನಾತ್ಮಕ ಹಾಗೂ ಭವಿಷ್ಯಕ್ಕೆ ಅನುಕೂಲವಾದ ಕಾರ್ಯ ಕೌಶಲ್ಯಗಳನ್ನು ಪಡೆದುಕೊಳ್ಳಲು ಅವಕಾಶಗಳನ್ನು ಒದಗಿಸಬೇಕು.

ಗ್ರಂಥಾಲಯ ಮತ್ತು ಸೌಲಭ್ಯ ಮತ್ತು ಪ್ರಯೋಗ ಶಾಲೆಗಳಲ್ಲಿ ಅನುಭವಗಳನ್ನು ಒದಗಿಸುವುದು ತುಂಬಾ ಮುಖ್ಯ. ಅಂತಹ ಸೌಲಭ್ಯಗಳು ಎಲ್ಲಾ ಮಕ್ಕಳಿಗೂ ದೊರೆಯುವಂತೆ ಒಟ್ಟಾರೆ ಪ್ರಯತ್ನವೂ ಆಗಬೇಕು. ಈ ಎರಡು ವರ್ಷಗಳ ಕಾಲದ ವ್ಯಾಸಂಗದ ಮೇಲೆ ಬೋರ್ಡ್ ಪರೀಕ್ಷೆಯ ಭೂತದ ಕರಿನೆರಳು ಬೀಳುವುದರಿಂದ ಇಲ್ಲಿ ಪಡೆಯುವ ಅಂಕಗಳ ಮೇಲೆಯೇ ಭವಿಷ್ಯದ ಆಯ್ಕೆಗಳು ನಿರ್ಭರವಾಗಿರುತ್ತದೆ. ಅನೇಕ ವೇಳೆ ವರ್ಷದ ಪ್ರಥಮಾರ್ಧದ ಕೊನೆಯಲ್ಲಿಯೇ ’10ನೇ ತರಗತಿಯ ಇಡೀ ಪಠ್ಯಕ್ರಮವನ್ನು ಪೂರೈಸಿದ್ದೇವೆ. ಮತ್ತು ವರ್ಷದ ಉಳಿಕೆಯ ಅವಧಿಯನ್ನು ಪುನರಾವರ್ತನೆಗೆ ಬಳಸಿಕೊಳ್ಳಲಾಗುತ್ತದೆ. ಅದರಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಚೆನ್ನಾಗಿ ಸನ್ನದ್ಧರಾಗುತ್ತಾರೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಈ ಘಟ್ಟದ 9ನೇ ತರಗತಿ ಮತ್ತು ನಂತರದ 11ನೇ ತರಗತಿಯನ್ನು ಈ ಕಾರಣಕ್ಕಾಗಿಯೇ ಬಲಿ ಕೊಡಲಾಗುತ್ತದೆ. ಪರೀಕ್ಷೆಯ ಬಗ್ಗೆ ಪೂರ್ವಾಗ್ರಹಗಳು ಮತ್ತು ಕಲಿಕಾ ಅಗತ್ಯಗಳ ಬಗ್ಗೆ ದೇಹಕ್ಕೆ ಹಾನಿಯುಂಟುಮಾಡುವ ಪರಿಣಾಮಗಳ ಬಗ್ಗೆ ಮರು ವಿಮರ್ಶೆ ನಡೆಸಿ ಪ್ರಶ್ನಿಸಬೇಕಾಗಿದೆ. ಅಂತಹ ಅನುತ್ಪಾದಕ ಕಾರ್ಯದಲ್ಲಿ ಬಹುಶಃ ಮಗುವಿನ ಬದುಕಿನಲ್ಲಿ ಅತ್ಯಂತ ಫಲಪ್ರದವಾದ ಒಂದು ಂಂಜವನ್ನು ವ್ಯರ್ಥವಾಗಿ ಕಳೆಯುವುದು ಯೋಗ್ಯವೇ? ಂಂಜಂಂಚಿಂಂ ಏಕರೂಪದ ಸಮನಾದ ಗತಿಯಲ್ಲಿ ಕಲಿಯುವುದರಿಂದ ಪರೀಕ್ಷೆ ಸಿದ್ಧತೆಯನ್ನು ಇನ್ನಷ್ಟು ಉತ್ತಮವಾಗಿ ಬಳಸಿಕೊಳ್ಳುವುದು ಸಾಧ್ಯವಿಲ್ಲವೇ? ಪರೀಕ್ಷೆಯ ಕಾರಣದಿಂದಾಗಿ ಇನ್ನಿತರ ಶೈಕ್ಷಣಿಕ, ಅದರಲ್ಲೂ ವಿಶೇಷವಾಗಿ ಕ್ರೀಡೆ ಮತ್ತು ಕಲೆಯನ್ನು ಕೈಬಿಡಲಾಗುತ್ತದೆ. ಹಾಗೆಯೇ ಈಕ್ಷೇತ್ರಗಳನ್ನು ಸಂರಕ್ಷಿಸುವುದು ಮತ್ತು ಈ ಅವಧಿಯಲ್ಲಿ ಅರ್ಥಪೂರ್ಣ ಕಾರ್ಯಾನುಭವವನ್ನು ನೀಡಲು ಗಂಭೀರ ಪ್ರಯತ್ನ ಮಾಡುವುದು ಅನಿವಾರ್ಯ. ಪ್ರೌಢಾವಸ್ಥೆಯಲ್ಲಿ ಮಕ್ಕಳು ಮತ್ತು ಅವರಿಗೆ ನೀಡುವ ಶಿಕ್ಷಣ ತಮ್ಮ ಮುಂದಿನ ಬದುಕನ್ನು ರೂಪಿಸಲು ಸಹಾಯವಾಗಬೇಕು ಅಂದರೆ ಬರೇ ಪರೀಕ್ಷೆಗಾಗಿ ಅಂಕ ಗಿಟ್ಟಿಸಲು ಸಮಯವನ್ನು ವ್ಯಯಗೊಳಿಸುವ ಬದಲು ತಮ್ಮ ಬದುಕಿಗಾಗಿ ಬೇಕಾಗಿದ್ದ ಜೀವನ ಕೌಶಲ್ಯ ಮತ್ತು ವೃತ್ತಿಗೆ ಸಂಬಂಧ ಪಟ್ಟ ವಿಚಾರಗಳಿಗೆ ಹಚ್ಚು ಅತ್ಯವಶ್ಯ ಎಂದು ತಿಳಿದು ನಾವಿಂದು ಮನಗಾಣಬೇಕು. ಆಗ ಮಾತ್ರ ಪ್ರೌಢಶಾಲಾ ಹಂತದಲ್ಲಿ ಶಿಕ್ಷಣ ಹೆಚ್ಚು ಆಸಕ್ತಿದಾಯಕ ಹಾಗೂ ಅರ್ಥಪೂರ್ಣವಾದೀತು. ಈ ನೆಲೆಯಲ್ಲಿ ಪ್ರೌಢಶಾಲಾ ಹಂತದಲ್ಲೇ ವೃತ್ತಿಗೆ ಸಂಬಂಧಪಟ್ಟ ಇಠಿಡಿ ಮತ್ತು ಅದಕ್ಕೆ ಬೇಕಾದ ಪೂರ್ವ ತಯಾರಿ ಹಾಗೂ ಮಾನಸಿಕ ಸಿದ್ಧತೆ ಬಹಳ ಅಗತ್ಯವೆನಿಸುತ್ತದೆ, ವೃತ್ತಿ ಮಾರ್ಗ ದರ್ಶನ ಕೇಂದ್ರದ ಪರಿಕಲ್ಪನೆಯನ್ನು ನಾವಿಂದು ಕಾಣಬೇಕಾಗಿರುವುದು ನಮ್ಮ ಮುಂದಿನ ಸಮಾಜಕ್ಕೆ ನಮ್ಮ ಮಕ್ಕಳನ್ನು ಯಾವ ಹಂತದಲ್ಲಿ ತಯಾರುಗೊಳಿಸುತ್ತೇವೆ ಎಂದು ಆಗ ಮಾತ್ರ ನಮ್ಮ ಶಾಲೆಗಳಲ್ಲಿ ಪ್ರಸ್ತುತ ಇರುವ ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬರಲು ಸಾದ್ಯವಾದೀತು ಮತ್ತು ಮಾರ್ಗದರ್ಶನದ ಮೂಲ ಆಶಯ ಇರುವುದೇ ಪ್ರತ್ರಿಯೊಂದು ಮಗುವು ತನ್ನ ಮುಂದಿನ ವೃತ್ತಿಗೆ ತಾನೇ ನಿರ್ಧಾರ ಮಾಡಿ ಅದಕ್ಕೆ ಬೇಕಾದ ತಯಾರಿಯನ್ನು ತಾನೇ ಮಾಡುವುದು. ಈ ಹಿನ್ನೆಲೆಯಲ್ಲಿ ಶಾಲಾ ಅವಧಿಯಲ್ಲಿ ಅನೇಕ ಮಾರ್ಪಾಡು ಹಾಗೂ ಈಗ ವೃತ್ತಿ ಮಾರ್ಗದರ್ಶನಕ್ಕೆ ಇರುವ ಅವಕಾಶಗಳನ್ನು ಗಟ್ಟಿಗೊಳಿಸುತ್ತಾ ಹೋಗಬೇಕು.

ವೃತ್ತಿ ಮಾರ್ಗದರ್ಶನ ಕೇಂದ್ರ ಅಥವಾ ಕಾರ್ಯಕ್ರಮದ ಮೂಲಕ ಮೊದಲನೆಂುದಾಗಿ ನಮ್ಮ ಸಮಾಜದಲ್ಲಿ ಯಾವ ಯಾವ ರೀತಿಯ ಉದ್ಯೋಗ ಹಾಗೂ ಅದಕ್ಕೆ ಸಂಬಂಧಪಟ್ಟ ತರಬೇತಿಯ ಪರಿಜ್ಞಾನವನ್ನು ತಲುಪಿಸಲು ಇದಕ್ಕೆ ಬೇಕಾದ ಅರ್ಹತೆ ಮತ್ತು ಪೂರ್ವಸಿದ್ಧತೆಯನ್ನು ಅರ್ಥಮಾಡಿಸುವುದು. ಎರಡನೆಯದಾಗಿ ಶಾಲೆಗಳಲ್ಲಿ ವೃತ್ತಿ ಮಾರ್ಗದರ್ಶನದ ಪ್ರಯತ್ನ ಪ್ರತ್ಯೇಕವಾಗಿ ಮಾಡಿಕೊಳ್ಳದೆ ದಿನನಿತ್ಯದ ಪಾಠ ಪ್ರವಚನದೊಂದಿಗೆ ಆಯಾ ವ್ರತ್ತಿಗಳಿಗೆ ಬೇಕಾದ ಕೌಶಲ್ಯ ಹಾಗೂ ಆಲೋಚನೆಯನ್ನು ಬೆಳೆಸುವಂತಾಗಬೇಕು ಅಂದರೆ 8ನೇಯ ತರಗತಿಯಿಂದಲೇ ವೃತ್ತಿಗೆ ಬೇಕಾಗಿರುವ ಸಾಮಾನ್ಯ ಕೌಶಲ್ಯಗಳನ್ನು ಅಭ್ಯಾಸ ಮಾಡುತ್ತಾ ಬಂದರೆ 10ನೇ ತಲುಪುವಾಗ ಅವರ ಕೌಶಲ್ಯದಲ್ಲಿ ಹೆಚ್ಚು ಪ್ರಾವೀಣ್ಯತೆ ಪಡೆದಿರುತ್ತಾರೆ.

ಮೂರನೆಯದಾಗಿ ವೃತ್ತಿ ಮಾರ್ಗದರ್ಶನದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿರುವವರೊಂದಿಗೆ ಮತ್ತು ಹೆತ್ತವರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳು ತಮ್ಮ ವೃತ್ತಿಯನ್ನು ತಾವೇ ಅಯ್ಕೆ ಮಾಡುವ ಪ್ರಕ್ರಿಯೆ ಹಚ್ಚು ಒತ್ತು ಕೊಡಬೇಕು.

ನಾಲ್ಕನೆಯದಾಗಿ ವೃತ್ತಿ ಮಾರ್ಗದರ್ಶನ ಪ್ರಕ್ರಿಯೆಯಲ್ಲಿ ಶಾಲಾ ವ್ಯವಸ್ಥೆಗೆ ತುಂಬಾ ಗಮನ ಹರಿಸಿ ಮಕ್ಕಳ ಪ್ರತಿಭೆ ಹಾಗೂ ಆಸಕ್ತಿಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಕೇವಲ ಕೆಲವು ಮಕ್ಕಳನ್ನು ಮಾತ್ರವಲ್ಲ ಎಲ್ಲಾ ಮಕ್ಕಳ ಆಸಕ್ತಿ ಹಾಗೂ ಪ್ರತಿಭೆ ಗುರುತಿಸುವಂತಾಗಬೇಕು. ಒಟ್ಟಿನಲ್ಲಿ ಮುಂಬರುವ ಸಮಾಜದಲ್ಲಿ ಮಕ್ಕಳ ಅಂಕ ಅಥವಾ ಗ್ರೇಡ್‌ಗಳಿಗಿಂತ ಅವರಲ್ಲಿರುವ ಸಾಮರ್ಥ್ಯಗಳನ್ನು ಗಮನಿಸುವಂತ ಉದ್ಯೋಗ ಕ್ಷೇತ್ರಕ್ಕೆ ಬೇಕಾದ ವ್ಯಕ್ತಿತ್ವವನ್ನು ಶಿಕ್ಷಣದ ಮೂಲಕ ನೀಡಬೇಕಾಗಿದೆ. ಈಗಾಗಲೇ ಚರ್ಚಿಸಿದಂತೆ ಪ್ರೌಢಶಾಲೆಯಲ್ಲಿ ಇದನ್ನು ಹೇಗೆ ಮಾಡಬೇಕೆಂದು ಇದಕ್ಕೆ ನಿರ್ದಿಷ್ಟವಾದ ಮಾದರಿ ನಮ್ಮ ಮುಂದೆ ಇಲ್ಲದಿದ್ದರೂ ಅನೇಕ ಶಾಲೆಗಳಲ್ಲಿ ಚಿಂತಕರೂ, ಅಧ್ಯಾಪಕರೂ ಅನೇಕ ಪ್ರಯತ್ನ ಮಾಡಿರುವುದು ನಮ್ಮ ಮುಂದೆ ಇರುವುದೇ ನಮಗೆ ಮಾದರಿ. ನಮಗೆ ಬೇಕಾಗಿರುವ ಶಾಲಾ ತಂಡದ ಮನಸ್ಸು ಮತ್ತು ಓಅಈ ನೀಡಿರುವ ಚಟುವಟಿಕೆಗಳನ್ನು ನಾನಿಲ್ಲಿ ಚರ್ಚಿಸಲು ಇಷ್ಟಪಡುತ್ತೇನೆ.

 • ಮಕ್ಕಳ ಪ್ರಾಥಮಿಕ ಮಾಹಿತಿ ಸಂಗ್ರಹ (ಆಸಕ್ತಿ, ಸಾಮರ್ಥ್ಯ ಮತ್ತು ಇತರ),
 • ಪೂರ್ವಭಾವಿ ಮಾರ್ಗದರ್ಶನ (ಔಡಿಟಿಣಚಿಣಟಿ)
 • ವೃತ್ತಿಗೆ ಸಂಬಂಧ ಪಟ್ಟ ವೀಕ್ಷಣ
 • ಪಠ್ಯಪೂರಕ ಪ್ರಯೋಗಾತ್ಮಕ
 • ಕಾರ್ಯಾಗಾರಗಳು/ಶಿಬಿರಗಳು
 • ಹಂತಹಂತವಾದ ಚಟುವಟಿಕೆಗಳು
 • ಸಂಶೋಧನಾತ್ಮಕ ಯೋಜನೆ
 • ವೃತ್ತಿ ನಿರತರೊಂದಿಗೆ ಸಂವಾದ
 • ಚಿತ್ರ ರಸಗ್ರಹಣ
 • ನಾಯಕತ್ವ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಕೌಶಲ್ಯ
 • ಬರವಣಿಗೆ, ಂಂಣ, ವಿನ್ಯಾಸ, ಪ್ರೋತ್ಸಾಹ
 • ಪತ್ರಿಕಾ ದಾಖಲಾತಿ/ಸಂಗ್ರಹ
 • ಗ್ರಂಥಾಲಯದ ಬಳಕೆ
 • ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ
 • ಆಕಾಶ ವೀಕ್ಷಣೆ ಕಾರ್ಯಕ್ರಮ ಇತ್ಯಾದಿ

ಪ್ರೌಢ ಶಾಲಾವಸ್ಥೆಯಲ್ಲಿ ಪಠ್ಯದ ಜತೆಜತೆಯಲ್ಲಿ ಈ ತರಹದ ಅನೇಕ ಚಟುವಟಿಕೆಗಳನ್ನು ತೊಡಗಿಸಿಕೊಳ್ಳುತ್ತಾ ಎಲ್ಲಾ ಮಕ್ಕಳು ತಮ್ಮ ಆಸಕ್ತಿ, ಕೌಶಲ್ಯ ಬೆಳೆಸುವಂತಹ ವಾತಾವರಣದ ನಿರ್ಮಾಣ ಮಾಡುವುದು ಶಾಲಾ ವ್ಯವಸ್ಥೆಯ ಕರ್ತವ್ಯವಾಗಬೇಕು. ತಮ್ಮ ತಮ್ಮ ಶಾಲಾ ವ್ಯಾಪ್ತಿಯಲ್ಲಿ ಯಾವ ತರಹದ ಮತ್ತು ಯಾವಾಗ ಚಟುವಟಿಕೆಗಳನ್ನು ಮಾಡಬೇಕೆಂಬ ನಿರ್ಧಾರ ಆ ಸ್ಥಳೀಯ ಶಾಲಾ ವ್ಯವಸ್ಥೆಯವರೇ ತೀರ್ಮಾನ ಮಾಡಬೇಕು. ಶಾಲಾ ವ್ಯವಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನದ ಪರಿಕಲ್ಪನೆ ಬಹಳ ಮುಖ್ಯವಾದುದು ಚಟುವಟಿಕೆಗಳು ಬರೀ ಕಾರ್ಯಕ್ರಮಕ್ಕೆ ಸೀಮಿತವಾಗದೆ ಮಕ್ಕಳ ಕಲಿಕೆ ಹಾಗೂ ಮುಂದಿನ ವೃತ್ತಿಗೆ ಬೇಕಾದ ಕೌಶಲ್ಯಗಳಿಗೆ ಪೂರಕವಾಗಿರಬೇಕು. ಒಟ್ಟಿನಲ್ಲಿ ಈಗಾಗಲೆ ಇರುವ ಅಂಕ ಅಥವಾ ಗ್ರೇಡ್‌ಗೆ ಸೀಮಿತವಾಗಿ ನಡೆಸುವ ಬದಲು ರಾಷ್ಟ್ರೀಯ ಪಠ್ಯಕ್ರಮ 2005ರಲ್ಲಿ ನೀಡಿರುವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಶಿಕ್ಷಣ ವ್ಯವಸ್ಥೆ ಮಾರ್ಪಾಡಾಗಬೇಕು. ಅದನ್ನು ನಾವು ಮೊದಲು ನಮ್ಮ ನಮ್ಮ ಶಾಲೆಗಳಲ್ಲಿ ಆರಂಭಿಸೋಣ. ಇಲ್ಲಿ ಚರ್ಚಿಸಿರುವ ಅನೇಕ ವಿಷಯಗಳು ಶಿಕ್ಷಣ ಹೇಗಿರಬೇಕೆಂಬ ಆಶಯದ ಜತೆಗೆ ಮಕ್ಕಳಿಗೆ ವೃತ್ತಿಯ ಆಯ್ಕೆಯಲ್ಲಿ ತಾನೇ ನಿರ್ಧಾರ ಮಾಡುವ ಪ್ರಕ್ರಿಯೆ ಇದು ಸದಾ ನಡೆಯುತ್ತಿರಬೇಕು, ನಿರಂತರವಾಗಿ ನಡೆಯಬೇಕು. ವೃತ್ತಿ ಮಾರ್ಗದರ್ಶನ ಬಗ್ಗೆ ನಾನು ಇಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಿರುತ್ತೇನೆ. ಇಂತಹ ಒಂದು ಚಿಂತನೆಯನ್ನು ನಾವು ಪ್ರತಿಯೊಬ್ಬರೂ ಆರಂಭಿಸಿದಲ್ಲಿ, ತಮ್ಮ ಚಿಂತನೆಯೊಂದಿಗೆ, ಮಕ್ಕಳ ಮತ್ತು ಹೆತ್ತವರ ಚಿಂತನೆಗಳು ಸೇರಿ ನಮ್ಮ ವೃತ್ತಿ ಮಾರ್ಗದರ್ಶನ ಕೇಂದ್ರಗಳು ಹೊಸ ರೂಪದಲ್ಲಿ ಹೊರಹೊಮ್ಮಿ ಎಲ್ಲಾ ಮಕ್ಕಳಿಗೆ ವೃತ್ತಿ ಮಾರ್ಗದರ್ಶನವು ಲಭಿಸಲಿ ಎಂದು ಆಶಿಸುತ್ತೇನೆ.

ಇಸ್ಮತ್ ಫಜೀರ್

ರಾಷ್ಟ್ರೀಯತೆಯ ಪರಿಕಲ್ಪನೆಯೊಂದಿಗೆ ಹೋರಾಡಿದ ಪ್ರಪ್ರಥಮ ರಾಜ : ನಮ್ಮ ಇತಿಹಾಸವನ್ನು ವಿರೂಪಗೊಳಿಸಿದಂತೆಯೇ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನೂ ಕೆಲವು ಸಂದರ್ಭಗಳಲ್ಲಿ ತಿರುಚಲಾಗಿದೆ. ಉದಾ: ನಮ್ಮ ರಾಷ್ಟ್ರೀಯ ಚಳವಳಿಯಲ್ಲಿ ಮುಸ್ಲಿಮರ ಪಾತ್ರ ನಗಣ್ಯ. ಸ್ವಾತಂತ್ರ್ಯ ಚಳವಳಿಯ ಬಗ್ಗೆ ಮುಸ್ಲಿಮರು ವಿಇಂಂ ಆಸ್ಥೆ ತೋರಿಸಿಲ್ಲ. ಅವರಿಗೆ ರಾಷ್ಟ್ರೀಯತೆಯ ಪರಿಕಲ್ಪನೆಯೋ, ಕಾಳಜಿಯೋ ಇರಲಿಲ್ಲ. ಇಂತಹ ಸತ್ಯಕ್ಕೆ ಅಪಚಾರವೆಸಗುವ ಕುತ್ಸಿತ ಪ್ರಯತ್ನಗಳು ಧಾರಾಳವಾಗಿ ನಡೆದಿದೆ. ಸ್ವಾತಂತ್ರ್ಯದ ಂಚಿಂಔ ಪರಿಕಲ್ಪನೆಯೂ ಉಪಖಂಡದ ಪ್ರಜೆಗಳಲ್ಲಿ ಇರದೇ ಇದ್ದಂತಹ ಆ ಕಾಲದಲ್ಲಿ ಅಪ್ಪಟ ರಾಷ್ಟ್ರೀಯವಾದಿ ಧೋರಣೆಯೊಂದಿಗೆ ವಸಾಹತುಶಾಹಿ ಶಕ್ತಿಗಳೊಂದಿಗೆ ಕಾದಾಡಿ ರಣರಂಗದಲ್ಲೇ ವೀರಮರಣವನ್ನಪ್ಪಿದ ಶಹೀದೇ ಮಿಲ್ಲತೇ ಫತೇ ಅಲಿ ಟಿಪ್ಪು ಸುಲ್ತಾನರ ಚರಿತ್ರೆಯ ಮೇಲೆ ಇತಿಹಾಸ ಲಂಪಟರು ಎರಚಿದ ಮಸಿ ಇಂದಿಗೂ ಮಾಸದಂತೆ ಪೀತ ಚರಿತ್ರೆಕಾರರ ಶನಿ ಸಂತಾನಿಗಳು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.

ಟಿಪ್ಪುವನ್ನು ಓರ್ವ ಮೂಢ ಮತಾಂಧ ಎಂದು ಸುಳ್ಳಾರೋಪಿಸುವ ಭರದಲ್ಲಿ ಆತನಿಗಿದ್ದ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಇಲ್ಲವಾಗಿಸುವ ಪ್ರಯತ್ನ ಚರಿತ್ರೆಯುದ್ದಕ್ಕೂ ನಡೆಯುತ್ತಾ ಬಂದಿದೆ. ಅಂಇಂಔವಶಾತ್ ಸತ್ಯವನ್ನು ಒರೆಗೆ ಹಚ್ಚಿ ಅದಕ್ಕೆ ಇಂಂಂಔ ಹೊಳಪು ನೀಡುವಂತಹ ಸ್ವಸ್ಥ ಮನಸ್ಕ ಇತಿಹಾಸಕಾರರು ಲಂಪಟರಿಗೆ ಸಮರ್ಥವಾಗಿಯೇ ಕಾಲ ಕಾಲಕ್ಕೆ ಪ್ರತ್ಯುತ್ತರ ನೀಡುತ್ತಲೇ ಬಂದಿದ್ದಾರೆ. ಪ್ರಸ್ತುತ ಕಾಲಘಟ್ಟ ಭಾರತದ ಫ್ಯಾಸಿಸಂ ಉಚ್ಛ್ರಾಯ ಸ್ಥಿತಿಗೇರಿದ ಕಾಲಘಟ್ಟ. ಫ್ಯಾಸಿಸಂನ ಮೂಲ ಸಿದ್ಧಾಂತ ಒಂದು ಸುಳ್ಳನ್ನು ನೂರು ಬಾರಿ ಪುನರಾವರ್ತಿಸಿ ಅದನ್ನು ಸತ್ಯವೆಂದು ಸಾಬೀತುಪಡಿಸಲು ಹೆಣಗಾಡುವುದು.

ಕೆಲವು ಇತಿಹಾಸಕಾರರು ಟಿಪ್ಪು ವೀರ, ಶೂರ ಸೇನಾನಿಯೇನೋ ಸರಿ ಆದರೆ ಅತನಿಗೆ ರಾಷ್ಟ್ರೀಯತೆಯ ಪರಿಕಲ್ಪನೆಯೇ ಇರಲಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಬರೆದದ್ದೂ ಇದೆ. ಆಸಕ್ತಿಯ ವಿಚಾರವೇನೆಂದರೆ 17ನೇ ಶತಮಾನದಲ್ಲಿ ಪೋರ್ಚುಗೀಸರೊಂದಿಗೆ ಕೆಚ್ಚೆದೆಯಿಂದ ಹೋರಾಡಿದ ವೀರ ರಾಣಿ ಅಬ್ಬಕ್ಕಳನ್ನು ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯೆನ್ನಲಾಗುತ್ತದೆ. ಆದರೆ ಉಪಖಂಡದಲ್ಲಿ ಸಾಮ್ರಾಜ್ಯಶಾಹಿ ಬಿಚಿಟಿಂಂ ಕಪಿಮುಷ್ಠಿಯು ಂಂಂಂಂಔ ಬಲಿಂ~ಇಂಂಂ ಸಂದರ್ಭ ಅಂದರೆ 18ನೇ ಶತಮಾನದ ಕೊನೆಯ ಒಂದೂವರೆ ದಶಕದಲ್ಲಿ ಉಪಖಂಡದ ಜನತೆಯ ಮೇಲೆ ದಾಸ್ಯದ ಸಂಕೋಲೆಯನ್ನು ಬಿಗಿಗೊಳಿಸಿದ ಬಿಚಿಟಿಂಂ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮನಾದ ಟಿಪ್ಪುವನ್ನು ತನ್ನ ಸಾರ್ವಭೌಮತೆಂು ಉಳಿವಿಗಾಗಿ ಹೋರಾಡಿದ ಅರಸ ಎಂಬರ್ಥದಲ್ಲಿ ಚಿತ್ರಿಸಲಾಗುತ್ತಿದೆ.

1799ರ ಮೇ 4ರಂದು ಟಿಪ್ಪು ಹುತಾತ್ಮನಾದ ಸುದ್ದಿ ತಿಳಿದಾಗ ಬಿಚಿಟಿ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ ಮದ್ಯದ ಲೋಟವನ್ನೆತ್ತಿ ಲೇಡಿಸ್ ಎಂಡ್ ಜಂಟಲ್‌ಮ್ಯಾನ್, ಮದ್ಯದ ಈ ಗುಟುಕು ಇಂಡಿಯಾದ ಹೆಣಕ್ಕೆ ಎಂದು ಂಂಇಂಂಂಂಂಇ ಮಾಡಿದ್ದ. ಒಂದು ವೇಳೆ ಟಿಪ್ಪು ರಾಷ್ಟ್ರೀಯವಾದಿಯಾಗಿರದಿದ್ದರೆ ಆತ ಇಂಡಿಯಾದ ಹೆಣ ಎನ್ನುವುದಕ್ಕೆ ಬದಲಾಗಿ ಮೈಸೂರಿನ ಹೆಣ ಎನ್ನುತ್ತಿದ್ದನೇನೋ?

“Tippu is finished, the British power has increased. The whole East India is already theirs. Poona will be the next victim.

Evil day seem to be ahead, there is no escape from destiny” ಭಾರತದಲ್ಲಿ ಬಿಚಿಟಿಂಂ ಆಳ್ವಿಕೆಯ ವಿಸ್ತರಣೆಗೆ ಅತ್ಯಂತ ಪ್ರಬಲ ಮತ್ತು ಏಕೈಕ ತಡೆಯಾಗಿದ್ದದ್ದು ಟಿಪ್ಪು ಎಂಬ ಸತ್ಯವನ್ನು ಸ್ವತಃ ಬಿಚಿಟಿ ಪರವಿದ್ದ ಇತಿಹಾಸಕಾರರೇ ಇಂಂಂಂಂಔ ಕಡೆಗಳಲ್ಲಿ ದಾಖಲಿಸಿದ್ದಾರೆ. ಟಿಪ್ಪು ರಣರಂಗದಲ್ಲಿ ಹುತಾತ್ಮನಾದ ಸುದ್ದಿ ತಿಳಿದಾಗ ಪಶ್ಚಾತ್ತಾಪದಿಂದ ನರಳಿದ ಮರಾಠರ ’ನಾನಾ’ ಹೃದಯವೇದನೆಯಿಂದ ಅಂದಿದ್ದ ಮಾತುಗಳನ್ನು ಬಿಚಿಟಿ ಇತಿಹಾಸಕಾರರು ಹೀಗೆ ದಾಖಲಿಸಿದ್ದಾರೆ. ಈ ಮಾತುಗಳು ಟಿಪ್ಪುವಿಗೆ ಬಿಚಿಟಿಂಂ ವಿರುದ್ಧವಿದ್ದ ಇಂಂಂ, ಆತನ ಸ್ವಾತಂತ್ರ್ಯ ವಾಂಛೆಗೆ ಅತೀ ದೊಡ್ಡ ನಿದರ್ಶನವೂ ಹೌದು.

ಟಿಪ್ಪು ಮರಾಠರನ್ನಾಗಲೀ ನಿಜಾಮರನ್ನಾಗಲೀ ಅಥವಾ ಇನ್ಯಾರೇ ದೇಶೀಯ ರಾಜರನ್ನಾಗಲೀ ತನ್ನ ಶತ್ರುಗಳೆಂದು ಪರಿಗಣಿಸಿರಲಿಲ್ಲ. ಬಿಚಿಟಿಂಂ’್ನು ಉಪಖಂಡದಿಂದ ಒದ್ದೋಡಿಸುವ ಸಲುವಾಗಿ ಮರಾಠರು ಮತ್ತು ನಿಜಾಮರೊಂದಿಗೆ ಮೈತ್ರಿಯ ಹಸ್ತವನ್ನು ಟಿಪ್ಪು ಅನೇಕ ಬಾರಿ ಚಾಚಿದ್ದ. ಮೂರನೇ ಆಂಗ್ಲ ೆುಸೂರು ಯುದ್ಧದ ಬಳಿಕ ಟಿಪ್ಪು ಮರಾಠರ ಪ್ರತಿನಿಧ ಹರಿಪಂತನನ್ನು ಭೇಟಿಯಾಗಿ ಚೆನ್ನಾಗಿ ತಿಳಿದುಕೊಳ್ಳಿ. ಖಂಡಿತವಾಗಿಯೂ ನಾನು ನಿಮ್ಮ ಶತ್ರುವಲ್ಲ, ನಿಮ್ಮ ನಿಜವಾದ ಶತ್ರುಗಳು ಇಂಗಿಂಂಂಂ. ಅವರ ಕುರಿತಂತೆ ಎಚ್ಚರದಿಂದಿರಿ ಎಂದಿದ್ದ. – 1

ಗಾಂಧೀಜಿ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಟಿಪ್ಪುವನ್ನು ಸ್ವಾತಂತ್ರ್ಯ ಪ್ರವಾದಿ ಎಂದು ಕೊಂಡಾಡಿದ್ದರು. 1945ರ ಟಿಪ್ಪು ಸ್ಮಾರಕೋತ್ಸವ ಸಂದರ್ಭ ಗಾಂಧೀಜಿಯವರು ಎ.ಜೆ.ಖಲೀಲರಿಗೆ ಬರೆದ ಪತ್ರವೊಂದರಲ್ಲಿ ಟಿಪ್ಪುವಿನ ಕಾಲದಲ್ಲಿ ಅವನು ಸಾಧಿಸಿದ ಕೆಲಸವೇ ಸಾಕು, ಅದೊಂದು ಆನಂದ ಮೂಲ, ಸ್ಫೂರ್ತಿ ಮೂಲ. ಒಂದೆಡೆ ಟಿಪ್ಪು ಬಿಚಿಟಿಂಂ’್ನು ಉಪಖಂಡದಿಂದ ಒದ್ದೋಡಿಸುವ ಪ್ರಯತ್ನದಲ್ಲಿ ತಲ್ಲೀನನಾಗಿದ್ದರೆ, ಇನ್ನೊಂದೆಡೆ ನಮ್ಮ ಜನ ಹಿಂದೂ-ಮುಸ್ಲಿಂ ಎಂದು ಪರಸ್ಪರರೊಳಗೆ ಕಚ್ಚಾಡುತ್ತಾ ತಮ್ಮ ಬಾಗಿಲ ಬಳಿ ಇದ್ದ ಪರದೇಶಿ ಶತ್ರುವಿನ ಬಗ್ಗೆ ಉದಾಸೀನ ತಾಳಿದ್ದರು ಎಂದು ಉಲ್ಲೇಖಿಸಿದ್ದರು.

‘Discovery of India’ ಜವಾಹರ್‌ಲಾಲ್ ನೆಹರೂ ಅವರು ತನ್ನ ದಲ್ಲಿ ಹೈದರಾಲಿ-ಟಿಪ್ಪು ಬಿಚಿಟಿ ವಸಾಹತು ಶಾಹಿಯ ವಿರುದ್ಧ ಹೋರಾಡಿ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪಿಸ ಹೊರಟ ಪ್ರಭುತ್ವವನ್ನು ಸಂಪೂರ್ಣ ನಿರ್ನಾಮ ಮಾಡುವ ಹಂತಕ್ಕೆ ತಲುಪಿ ಬಿಚಿಟಿಂರಿಇ ವಿಪರೀತ ಯಾತನೆಯನ್ನು ತಂದೊಡ್ಡಿದ್ದರು ಎಂದು ಬರೆದಿದ್ದಾರೆ.

Alwood Equaite ತನ್ನ Romance of India ಕೃತಿಯಲ್ಲಿ ಒಂದು ವೇಳೆ ಹೈದರ್ ಜೀವಿಸಿದ್ದರೆ ಬಹುಶಃ ಆತ ಇಂಗಿಂಂಇಂಂ’ೆಸಂಧಾನ ಮಾಡಿಕೊಳ್ಳುತ್ತಿದ್ದನೇನೋ, ಆದರೆ ಟಿಪ್ಪುವಿನ ಉದ್ದೇಶ ಮಾತ್ರ ಇಂಗಿಂಂಂ’್ನು ಭಾರತದಿಂದ ಒದ್ದೋಡಿಸುವುದಾಗಿತ್ತು ಎಂದು

ದಾಖಲಿಸಿದ್ದಾನೆ.

1787ರ ಫೆಬ್ರವರಿ 2ರಂದು ಕಲ್ಲಿಕೋೆಯ ಫೌಜುದಾರ ಅರ್ಶದ್ ಬೇಗ್‌ನಿಗೆ ಬರೆದ ಪತ್ರವೊಂದರಲ್ಲಿ ಕಲ್ಲಿಕೋೆಯ ಜನರು ಬಿಚಿಟಿಂರಿಂಂ ಯಾವುದೇ ಸಾಮಾನು ಸರಂಜಾಮು ಕೊಳ್ಳದಂತೆ ಅವರಿಗೆ ಕಟ್ಟಾಜ್ಞೆ ವಿಧಿಸಬೇಕು. ತನ್ಮೂಲಕ ಬಿಚಿಟಿಂರಿಇ ಂಂಂಂಔವನ್ನು ತಂದೊಡ್ಡಬೇಕು ಎಂದು ಟಿಪ್ಪು ಬರೆದಿದ್ದನು. – 2

ಒಟ್ಟಾರೆಯಾಗಿ ಹೇಳುವುದಾದರೆ ರಾಷ್ಟ್ರೀಯತೆಯ ಪರಿಕಲ್ಪನೆಯನ್ನಿಟ್ಟು ಹೋರಾಡಿದ ಮೊಟ್ಟ ಮೊದಲ ಅರಸ ಟಿಪ್ಪು. ಪರಕೀಯರ ಗುಲಾಮಗಿರಿಯಲ್ಲಿ ನಮ್ಮ ಜನತೆ ನಲುಗುವುದರ ಕುರಿತು ಟಿಪ್ಪುವಿಗೆ ಅಪಾರ ವೇದನೆಯಿತ್ತು. ಆದ್ದರಿಂದಲೇ ಸಾಗರದಾಚೆಯಿಂದ ಬಂದವರನ್ನು ಮಾತ್ರ ಟಿಪ್ಪು ಶತ್ರುಗಳೆಂದು ಪರಿಗಣಿಸಿದ್ದ. ದೇಶೀಯ ರಾಜರುಗಳ ಮೇಲೆ ಟಿಪ್ಪುವಿಗೆ ನಿಜವಾಗಿಯೂ ಇಂಂವಿರಲಿಲ್ಲ. ಕೆಲವು ದೇಶೀಯ ರಾಜರುಗಳು ವ್ಯಾಪಾರಕ್ಕಾಗಿ ಬಂದ ಬಿಚಿಟಿಂರಿಇ ಸಾಮ್ರಾಜ್ಯ ವಿಸ್ತರಣೆಗೆ ಸಹಾಯ, ಸಹಕಾರ ನೀಡುತ್ತಿದ್ದುದನ್ನು ಸಹಿಸದೇ ಟಿಪ್ಪು ಅವರ ಮೇಲೆಯೂ ಯುದ್ಧ ಹೂಡಬೇಕಾಗಿ ಬಂದಿತ್ತು. ಒಂದು ವೇಳೆ ಟಿಪ್ಪುವಿನ ಈ ಉನ್ನತ ವಿಚಾರಧಾರೆಗೆ ಅಂದಿನ ದೇಶೀಯ ರಾಜರು ಸಹಕರಿಸಿದ್ದಿದ್ದರೆ, ಟಿಪ್ಪುವಿಗೆ ಅಗತ್ಯ ಬೆಂಬಲ ನೀಡಿದ್ದಿದ್ದರೆ 1947ಕ್ಕಿಂತ 150 ಂಂಜಂಳ ಹಿಂದೆಯೇ ಭಾರತ ಸ್ವಾತಂತ್ರ್ಯ ಪಡೆಯುತ್ತಿತ್ತು.

ನಾಡಿನ ರಕ್ಷಣೆಗಾಗಿ ಕರುಳ ಕುಡಿಗಳನ್ನು ಒತ್ತೆಯಿಟ್ಟ ಟಿಪ್ಪುವಿನ ಹೊರತಾದ ಇನ್ನೊಂದು ನಿದರ್ಶನ ಜಗತ್ತಿನ ಚರಿತ್ರೆಯಲ್ಲೇ ಸಿಗದು. ಪರಕೀಯರ ದಾಸ್ಯದಿಂದ ದೇಶವನ್ನು ವಿಮೋಚನೆಗೊಳಿಸುವ ನಿಟ್ಟಿನಲ್ಲಿ ರಣರಂಗದಲ್ಲೇ ವೀರಮರಣವನ್ನಪ್ಪಿದ ಚರಿತ್ರೆ ಜಾಗತಿಕ ಇತಿಹಾಸದಲ್ಲೇ ವಿರಳ. ಅಂತಹ ವಿರಳಾತಿವಿರಳ ಅರಸರ ಪಾಲಿಗೆ ಸೇರಿದ ವೀರಸ್ವಾತಂತ್ರ್ಯಸೇನಾನಿ ಶಹೀದೇ ಮಿಲ್ಲತೇ ಫತೇ ಅಲಿ ಟಿಪ್ಪುಸುಲ್ತಾನ್….!

ಅಪೂರ್ವ ಮಾನವತಾವಾದಿ ಅರಸ : ಟಿಪ್ಪು ತನ್ನ ವೈಯಕ್ತಿಕ ಬದುಕಿನಲ್ಲಿ ಓರ್ವ ಸಂಪ್ರದಾಯಸ್ಥ ಮುಸಲ್ಮಾನನಾಗಿದ್ದ. ಆದರೆ ಆತ ಎಂದೂ ತನ್ನ ಮುಸ್ಲಿಮೇತರ ಪ್ರಜೆಗಳ ಮೇಲೆ ತನ್ನ ನಂಬಿಕೆಯನ್ನು ಹೇರಿಲ್ಲ. ಆತ ಅತ್ಯಂತ ಸಹಿಂಂ ರಾಜನಾಗಿದ್ದ ಮತ್ತು ಇತರ ಧಮೀಯರ ನಂಬಿಕೆಗಳನ್ನು ಅಪಾರವಾಗಿ ಗೌರವಿಸುತ್ತಿದ್ದ. 1787ರಲ್ಲಿ ಟಿಪ್ಪು ಹೊರಡಿಸಿದ ಇಂಂಂಇಂಇಂಂಂಂ ಇಂತಿದೆ ಪರಧರ್ಮ ಸಹಿಂಂಇ ಕುರ್‌ಆನಿನ ಮೂಲಭೂತ ತತ್ವ. ಧರ್ಮದಲ್ಲಿ ಒತ್ತಾಯವಿಲ್ಲವೆಂದು ಕುರ್‌ಆನ್ ಹೇಳುತ್ತದೆ. ಸತ್ಯವಿವೇಚನೆಯು ಇಂಂಂತಿಂಂವಾದುದು. ಬೇರೆ ಧರ್ಮದ ದೈವ ವಿಗ್ರಹಗಳನ್ನು ದೂಷಿಸಬಾರದು ಎಂದು ಕುರ್‌ಆನ್ ಹೇಳುತ್ತದೆ. ಅಲ್ಲಾಹನನ್ನು ಬಿಟ್ಟು ಬೇರೆಯವರೊಡನೆ ಪ್ರಾರ್ಥಿಸುವರನ್ನು ನಿಂದಿಸಬೇಡಿ. ಹಾಗೆ ಮಾಡಿದರೆ ಅಲ್ಲಾಹನನ್ನೇ ದೂಷಿಸಿದಂತಾಗುತ್ತದೆ. ಅಲ್ಲಾಹನು ಇಚ್ಛಿಸಿದ್ದರೆ ನಮ್ಮನ್ನೆಲ್ಲಾ ಒಂದೇ ಕೋಮಿಗೆ ಸೇರಿಸುತ್ತಿದ್ದ..- 3 ಇಂತಹ ಅಪ್ಪಟ ಮಾನವತಾವಾದಿ ಟಿಪ್ಪುವಿಗೆ ಇತಿಹಾಸ ಲಂಪಟರು ಮತಾಂಧತೆಯ ಹಣೆಪಟ್ಟಿ ಹಚ್ಚಿ ಸತ್ಯಕ್ಕೆ ಅಪಚಾರ ವೆಸಗುತ್ತಿರುವುದು ಂಂಂಂಇಂಔಂಂ.

ಟಿಪ್ಪುವಿಗೆ ತಂದೆ ಹೈದರಾಲಿ ಹಿಂದೂ ಮತ್ತು ಇಸ್ಲಾಂ ಎರಡೂ ಧರ್ಮದ ಶಿಕ್ಷಣವನ್ನೂ ಕೊಡಿಸಿದ್ದ. ಮೌಲವಿ ಉಬೇದುಲ್ಲಾಹ್ ಇಸ್ಲಾಮೀ ಧಾರ್ಮಿಕ ಶಿಕ್ಷಣ ನೀಡುತ್ತಿದ್ದರೆ ಜೊತೆ ಜೊತೆಯಾಗಿ ಗೋವರ್ಧನ ಪಂಡಿತರು ಹಿಂದೂ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದರು. ಎಳವೆಯಲ್ಲೇ ಪಡೆದ ಈ ಶಿಕ್ಷಣ ಟಿಪ್ಪುವನ್ನು ಓರ್ವ ಅಪ್ಪಟ ಮಾನವತಾವಾದಿಯನ್ನಾಗಿ ರೂಪಿಸಿತು. ದೇವರು ಯಾವುದೇ ಒಂದು ಧರ್ಮದ ರೂಪಕ್ಕೆ ಸೀಮಿತವಲ್ಲ. ಅವನು ಯಾವುದರಿಂದಲೂ ಹೊರತಲ್ಲ ಎಂದು ಟಿಪ್ಪು ಪ್ರತಿಪಾದಿಸುತ್ತಿದ್ದ. ಟಿಪ್ಪು ತನ್ನ ಆಡಳಿತಾವಧಿಯಲ್ಲಿ 156 ದೇವಾಲಯಗಳಿಗೆ ಉಂಬಳಿ ನೀಡಿದ್ದ. ಹಿಂದೂ ಮರಾಠರು ಹಾನಿಗೈದಿದ್ದ ಶೃಂಗೇರಿ ಶಾರದಾ ಪೀಠ, ಶ್ರೀರಂಗ ದೇವಾಲಯದ ದುರಸ್ಥಿಗೆ ಉದಾರ ಧನ ಸಹಾಯ ನೀಡಿದ್ದ.

ಟಿಪ್ಪುವಿಗೆ ಮಾನವ ಘನತೆ ಮತ್ತು ಮಾನವ ಹಕ್ಕುಗಳ ಕುರಿತಂತೆ ಅಪಾರ ಕಾಳಜಿಯಿತ್ತು. 1787ರಲ್ಲಿ ಮಲಬಾರ್‌ನ ಗವರ್ನರ್ ಬರೆದ ಪತ್ರದಲ್ಲಿ ಮಲಬಾರ್ ಪ್ರದೇಶದಲ್ಲಿ ಕೆಳಜಾತಿಯ ಮಹಿಳೆಯರು ತಮ್ಮ ಸ್ತನಗಳನ್ನು ತೆರೆದು ಅರೆನಗ್ನವಾಗಿ ತಿರುಗಾಡುತ್ತಿದ್ದ ಪದ್ಧತಿಯನ್ನು ನಿಇಂ’ಸಲು ಆದೇಶಿಸಿದ್ದ. ಧಾರ್ಮಿಕ ವಿಶ್ವಾಸದ ನೆದಲ್ಲಿ ಮೇಲ್ಜಾತಿ ಜನಗಳು ಕೆಳಜಾತಿಯ ಮಹಿಳೆಯರ ಮೇಲೆ ಹೇರಿದ್ದ ನೀಚ ಪದ್ಧತಿಯನ್ನು ಇಲ್ಲವಾಗಿಸಲು ಸಾದ್ಯಂತ ಯತ್ನಿಸಿದ ಟಿಪ್ಪುವಿನದು ಎಂತಹ ಮಾನವೀಯ ಅಂತಃಕರಣ ಎನ್ನುವುದಕ್ಕೆ ಒಂದು ನಿದರ್ಶನಂಇಔ. ಟಿಪ್ಪುವಿಗೆ ದುಡಿಯುವ ವರ್ಗದ ಜನರ ಮೇಲೆ, ಅವರ ಹಕ್ಕುಗಳ ರಕ್ಷಣೆಯ ಕುರಿತಂತೆ ಂಚಿಂಔವಾದ ಪರಿಕಲ್ಪನೆಯಿತ್ತು. 1789ರಲ್ಲಿ ಟಿಪ್ಪು

ತನ್ನ ಮಂತ್ರಿಮಂಡಲವನ್ನುದ್ದೇಶಿಸಿ ಮಾಡಿದ ಂಂಣ ಶ್ರಮಿಕ ವರ್ಗದ ಪರ ಮಿಡಿಯುವ ಆತನ ಅಂತರಂಗವನ್ನು ಪ್ರದರ್ಶಿಸುತ್ತದೆ. ಫರೋಗಳು ತಮ್ಮ ಗುಲಾಮರ ಪರಿಶ್ರಮದಿಂದ ಪಿರಮಿಡ್‌ಗಳನ್ನು ಕಟ್ಟಿದರು. ಚೀನಾ ಮಹಾಗೋಡೆಯ ದಾರಿಗುಂಟ ಬಲವಂತಕ್ಕೊಳಗಾಗಿ ಅದನ್ನು ಕಟ್ಟಿದ, ಕಟ್ಟುವಾಗ ತಮ್ಮ ಮೇಲ್ವಿಚಾರಕರ ಚಾಟಿ ಮತ್ತು ಕೊರಡೆಗಳಿಂದ ಪೆಟ್ಟು ತಿಂದ ಗುಲಾಮರ ರಕ್ತ ಹಾಗೂ ಮೂಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರೋಮ್ ಸಾಮ್ರಾಜ್ಯ, ಬ್ಯಾಬಿಲೋನ್, ಗ್ರೀಸ್ ಮತ್ತು ಕಾರ್ಥೆಜ್‌ಗಳ ಭವ್ಯ ಕಟ್ಟಡಗಳನ್ನು ನಿರ್ಮಿಸಲು ಅಸಂಖ್ಯಾತ ಜನಗಳು ಗುಲಾಮರಾಗಿ ಸರಪಳಿಗಳಿಂದ ಬಂಧಿಸಲ್ಪಟ್ಟರು. ಸಾವಿರ-ಸಾವಿರ ಜನರು ರಕ್ತಹರಿಸಿ ಸಾವನ್ನಪ್ಪಿದ್ದರು. ಇದು ಕೈಲಾಗದ ದಪಿಜಂಔ ರಾಜನೊಬ್ಬನ ಪೊಳ್ಳು ಕೀರ್ತಿಯ ಹಂಬಲಕ್ಕಾಗಿ ಅವನ ದಬ್ಬಾಳಿಕೆಗೊಳಗಾಗಿ ತಮ್ಮ ಮನೆ ಮಠಗಳಿಂದ ಎಳೆ ತಂದು ಗುಲಾಮರನ್ನಾಗಿ ಮಾಡಿ ಸರಪಳಿಗಳಿಂದ ಬಂಧಿತರಾದ ಜನರ ನೋವು ನರಳಿಕೆಗಳಿಂದ ಹುಟ್ಟಿಕೊಂಡ ಸಾಮ್ರಾಜ್ಯವೊಂದರ ಅವಇಂಂಂಳವು. ಆದುದರಿಂದ ನಮ್ಮ ರಸ್ತೆ ಮತ್ತು ಅಣೆಕಟ್ಟುಗಳ ಅಡಿಪಾಯದೊಡನೆ ಮಾನವರ ರಕ್ತ ಮತ್ತು ಕಣ್ಣೀರು ಬೆರೆಯಬಾರದು. – 4

ಟಿಪ್ಪು ತನ್ನ ಬದುಕಿನ ಬಹುಕಾಲ ಯುದ್ಧರಂಗದಲ್ಲೇ ಕಳೆಯಬೇಕಾಗಿ ಬಂದಿದ್ದರೂ ಆತ ತನ್ನ ಶತ್ರು ಸೈನಿಕರನ್ನು ಯುದ್ಧ ಭೂಮಿಯಲ್ಲಿ ಮಾತ್ರ ಶತ್ರುಗಳೆಂದು ಪರಿಗಣಿಸುತ್ತಿದ್ದ. ಶತ್ರುಗಳ ಸ್ತ್ರೀಯರ, ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯವೆಸಗಬಾರದೆಂದು ತನ್ನ ಸೈನಿಕರಿಗೆ ಆದೇಶಿಸಿದ್ದ. ಈ ನಿಟ್ಟಿನಲ್ಲಿ ಒಂದೇ ಶಾಸನವನ್ನು ಕ್ರಮವಾಗಿ 1783, 1785 ಮತ್ತು 1787ರಲ್ಲಿ ಮೂರು ಬಾರಿ ಹೊರಡಿಸಿದ್ದ.

ಜಯಿಸಿದ ಶತ್ರುವಿನ ಸಂಪತ್ತನ್ನು ಲೂಟುವುದರಿಂದ ಕೆಲವೇ ಕೆಲವರು ಶ್ರೀಮಂತರಾಗುತ್ತಾರೆ. ಂಂಔಛಿವು ದರಿದ್ರಗೊಳ್ಳುತ್ತದೆ. ಮತ್ತು ಸಮಸ್ತ ಸೈನ್ಯಕ್ಕೆ ಅಪಕೀರ್ತಿ ತಟ್ಟುತ್ತದೆ. ಯುದ್ಧಗಳು ಕೇವಲ ಯುದ್ಧ ಭೂಮಿಗೆ ಸೀಮಿತವಾಗಿರಬೇಕು. ಅದನ್ನು ಅಮಾಯಕ ನಾಗರಿಕರ ಮೇಲೆ ಹೇರದಿರಿ. ಶತ್ರುಗಳ ಸ್ತ್ರೀಯರನ್ನು ಗೌರವಿಸಿ, ಅವರ ಮಕ್ಕಳನ್ನು ದುರ್ಬಲರನ್ನು ರಕ್ಷಿಸಿರಿ. – 5 ಇಂತಹದ್ದೇ ಆದೇಶವನ್ನು ಟಿಪ್ಪು ತನ್ನ ಮೈತ್ರಿ ಪಕ್ಷದವರಾದ ಫ್ರೆಂಚರಿಗೂ ಹೊರಡಿಸಿದ್ದ. ಇಂತಹ ಅಪ್ಪಟ ಮಾನವೀಯ ಕಾಳಜಿಯ ಅರಸ ಜಾಗತಿಕ ಚರಿತ್ರೆಯಲ್ಲೇ ವಿರಳಾತಿವಿರಳ.

ಅತ್ಯಂತ ನ್ಯಾಯ ನಿಂಂ~ರಿಂಂಂಗಿಂಙ ಟಿಪ್ಪು ತಪ್ಪಿತಸ್ಥರನ್ನು ಶಿಕ್ಷಿಸುವಾಗಲೂ ಅವರ ಮಾನವಹಕ್ಕುಗಳನ್ನು ಗೌರವಿಸುತ್ತಿದ್ದ. ಟಿಪ್ಪು ಯಾರನ್ನೂ ಕಾನೂನು ಬಿಟ್ಟು ಶಿಕ್ಷಿಸುತ್ತಿರಲಿಲ್ಲ. 1787ರ ಟಿಪ್ಪುವಿನ ಕಂದಾಯ ನಿಯಮಾವಳಿಯಲ್ಲಿ ಮಳೆ ಬಾರದ ಹಾಗೂ ನೀರಾವರಿ ವ್ಯವಸ್ಥೆ ಸರಿಯಾಗಿರದಿದ್ದ ಂಂಔ ಕಾಲದಲ್ಲಿ ರೈತರ ಮೇಲಿನ ಕಂದಾಯವನ್ನು ಕಡಿಮೆ ಮಾಡಬೇಕು. ಅಗತ್ಯ ಬಿದ್ದರೆ ಸಂಪೂರ್ಣ ಮನ್ನಾ ಮಾಡಬೇಕು. ರೈತ ಹೊಸದಾಗಿ ಜಮೀನನ್ನು ಉಳುಮೆ ಮಾಡಿದ ಮೊದಲ ಮೂರು ಂಂಜ ಕಂದಾಯವನ್ನು ಪಾವತಿಸಬೇಕಿಲ್ಲ. – 6

ಟಿಪ್ಪು ಸುಲ್ತಾನ್ ಅತ್ಯಂತ ಜನಪರ ರಾಜ, ತನ್ನ ಪ್ರಜೆಗಳ ನೋವು ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದ ಕರುಣಾಮಯಿ ರಾಜ. ಮಾನವ ಹಕ್ಕುಗಳು ಮತ್ತು ಮಾನವ ಘನತೆಯ ಬಗ್ಗೆ ಸದಾ ಜಾಗೃತನಾಗಿದ್ದ ರಾಜ. ಮಹಿಳೆಯರ, ಮಕ್ಕಳ, ದುರ್ಬಲರ, ಶೋಷಿತರ ಬಗ್ಗೆ ಟಿಪ್ಪುವಿಂಂಂಔ ಕಾಳಜಿ ಹೊಂದಿದ್ದ ಇನ್ನೊಬ್ಬ ರಾಜ ಉಪಖಂಡದ ಚರಿತ್ರೆಯಲ್ಲೇ ಇನ್ನೊಬ್ಬ ಸಿಗಲಾರ. ಟಿಪ್ಪುವಿನ ಆಳ್ವಿಕೆಯ ಕಾಲ ಮತ್ತು ಆತನ ಹೋರಾಟ ಭಾರತದ ಚರಿತ್ರೆಯ ಪುಟಕ್ಕೆ ನಿಸ್ಸಂಶಯವಾಗಿಯೂ ಒಂದು ಮೆರುಗು. ಟಿಪ್ಪುವಿನ ಚರಿತ್ರೆಗೆ ಮಸಿ ಬಳಿಯುವವರು

ಮಾನವತೆಗೇ ಕಳಂಕ…..

ಆಕರ

 1. ಕೋ. ಚೆನ್ನಬಸಪ್ಪ – ಹಿಂದೂ ಧರ್ಮ ರಕ್ಷಕ ಟಿಪ್ಪು ಸುಲ್ತಾನ್
 2. Selected Letters of Tippu Sulthan – Krick Patrick
 3. The Sword of Tippu Sulthan- Bhagwan S. Gidwani
[td_block_7 custom_title="Articles " category_id="24" post_ids="Education Recent" ajax_pagination="next_prev" sort="" f_header_font_family="364" f_ajax_font_family="364" f_more_font_family="364" m6f_title_font_family="364" m6f_cat_font_family="364" m6f_meta_font_family="364" m6f_title_font_weight="600" m6f_title_font_size="16"][td_block_7 custom_title="JF Awards & Recognition" category_id="25" post_ids="Education Recent" ajax_pagination="next_prev" sort="" f_header_font_family="364" f_ajax_font_family="364" f_more_font_family="364" m6f_title_font_family="364" m6f_cat_font_family="364" m6f_meta_font_family="364" m6f_title_font_weight="600" m6f_title_font_size="16"][td_block_7 custom_title="All Our Activities" category_id="18" post_ids="Education Recent" ajax_pagination="next_prev" sort="" f_header_font_family="364" f_ajax_font_family="364" f_more_font_family="364" m6f_title_font_family="364" m6f_cat_font_family="364" m6f_meta_font_family="364" m6f_title_font_weight="600" m6f_title_font_size="16"]

All Recent Activities

[td_block_big_grid_9 category_id="18" td_grid_style="td-grid-style-1" sort="oldest_posts"]